English · हिंदी · ಕನ್ನಡ
← ಎಲ್ಲಾ ಸಹಾಯ ವಿಷಯಗಳು
QR ಕೋಡ್ ಸ್ಕ್ಯಾನ್ ಆಗುತ್ತಿಲ್ಲ
ಇವುಗಳನ್ನು ಇದೇ ಕ್ರಮದಲ್ಲಿ ಪ್ರಯತ್ನಿಸಿ — ಹೆಚ್ಚಿನ ಸಂದರ್ಭಗಳು ಮೊದಲ ಎರಡರಿಂದಲೇ ಬಗೆಹರಿಯುತ್ತವೆ.
- ಬೆಳಕು ಹೆಚ್ಚಿಸಿ. ಬಿಲ್ನ ಮುದ್ರಣ ತೆಳುವಾಗಿರುತ್ತದೆ; ಕಡಿಮೆ ಬೆಳಕೇ ಮುಖ್ಯ ಕಾರಣ.
- ಫೋನ್ ಸ್ವಲ್ಪ ದೂರ ಮತ್ತು ಸ್ಥಿರವಾಗಿ ಹಿಡಿಯಿರಿ. ತುಂಬಾ ಹತ್ತಿರ ಹಿಡಿಯುವುದೇ ಹೆಚ್ಚು
ತೊಂದರೆ ಕೊಡುತ್ತದೆ. ಕ್ಯಾಮೆರಾಕ್ಕೆ ಫೋಕಸ್ ಆಗಲು ಎರಡು-ಮೂರು ಸೆಕೆಂಡ್ ಕೊಡಿ.
- ಬಿಲ್ ಅನ್ನು ನೇರ ಮಾಡಿ. ಕೋಡ್ ಮೇಲೆ ಮಡಿಕೆ ಇದ್ದರೆ ಓದುವುದಿಲ್ಲ.
- ಕೋಡ್ ಮಸುಕಾಗಿದೆಯೇ ನೋಡಿ. ಶಾಖ ಅಥವಾ ತೇವದಿಂದ ಬಿಲ್ನ ಮುದ್ರಣ ಬೇಗ ಅಳಿಸಿಹೋಗುತ್ತದೆ.
ಕ್ಯಾಮೆರಾ ತೆರೆಯದಿದ್ದರೆ
ZlipR ಗೆ ಕ್ಯಾಮೆರಾ ಅನುಮತಿ ಬೇಕು. ಫೋನ್ನ ಸೆಟ್ಟಿಂಗ್ಸ್ನಲ್ಲಿ ZlipR ಹುಡುಕಿ ಕ್ಯಾಮೆರಾ ಆನ್ ಮಾಡಿ.
ಆಮೇಲೂ ಓದದಿದ್ದರೆ
ಬಿಲ್ ಇಟ್ಟುಕೊಂಡು ನಮಗೆ ತಿಳಿಸಿ. ಖರೀದಿಸುವ ಮೊದಲು ಆಫರ್ ಸೇವ್ ಆಗಿದ್ದರೆ ನಂತರವೂ ಕ್ಯಾಶ್ಬ್ಯಾಕ್
ಕೊಡಬಹುದು.